The translation of PARI stories to Kannada is a voluntary initiative of GN Mohan at Crazy Frog Media, Bangalore. Translators from different parts of the world are members of his team. On the International Translation Day, September 30, 2017, we bring you the thoughts that a few of the volunteers have shared with us.
Santosh Tamraparni
Working as an Engineer in Mysuru, Karnataka, Santosh is a freelance writer and columnist.
Never a ‘dal’ moment a storyby Parth MN on the agrarian crisis faced by farmers in Marathwada is one of the stories translated into Kannada by Santosh ಬೆಳೆದವರ ಮನೆಯಲ್ಲಿ ಬೇಯದ ಬೇಳೆ
This is what Santosh says about translations:
It is not really easy to translate somebody’s work. Translation, may not be as holistic and powerful as the original. Every language has its own native and raw beauty which may be lost during translation. For me, translation gives an opportunity to read writer’s thoughts to some extent. It is relatively easy to translate what author has said, it is difficult to say what he tried to convey.
ಅನುವಾದವೆಂಬುದು ಅಂದುಕೊಂಡಷ್ಟು ಸರಳವಲ್ಲ. ಒಬ್ಬರು ಈಗಾಗಲೇ ಹೇಳಿದ್ದನ್ನು ಅಷ್ಟೇ ಸಮರ್ಥವಾಗಿ ಮತ್ತು ಸಮಗ್ರವಾಗಿ ಬೇರೆ ಭಾಷೆಯಲ್ಲಿ ಹೇಳುವುದು ಕಷ್ಟಸಾಧ್ಯ. ಪ್ರತಿಯೊಂದು ಭಾಷೆಗೂ ಅದರದ್ದೇ ಆದ ಸೊಗಡಿದೆ. ಅನುವಾದಿಸಿದಾಗ ಅದೇ ರಸವನ್ನು ಉಣಬಡಿಸಲು ಸಾಧ್ಯವಾಗದೇ ಹೋಗಬಹುದು. ನನಗೆ, ಅನುವಾದ ಒಂದೊಳ್ಳೆ ಅನುಭವ ನೀಡುತ್ತದೆ. ಒಂದೊಳ್ಳೆಯ ಸಾಹಿತ್ಯ ಓದಲು ದಕ್ಕುತ್ತದೆ ಮತ್ತು ತಕ್ಕ ಮಟ್ಟಿಗೆ ಮೂಲ ಲೇಖಕರ ಆಶಯವನ್ನು ಅರಿಯಲು ಅವಕಾಶ ಸಿಗುತ್ತದೆ. ಅಷ್ಟಾಗಿಯೂ, ಲೇಖಕರು ಹೇಳಿದ್ದನ್ನು ಅನುವಾದಿಸಬಹುದೇ ಹೊರತು ಹೇಳಲು ಪ್ರಯತ್ನಿಸಿದ್ದನ್ನು ಅನುವಾದಿಸುವುದು ಸವಾಲಿನ ಕೆಲಸ.
Naren Hoovinakatte is a scientist interested in education & outreach and is passionate about language & culture. He is from Bengaluru, currently working in the Netherlands.
Naren writes:
From home to convent school to a different state to a different country – as my mother tongue Kannada kept reducing in my environment, my passion and interest in it kept increasing. And then the possibility of doing Kannada translations in PARI appeared like a great way to grow my knowledge of Kannada and social awareness. It has been a great journey so far working with PARI team and I am grateful for the same.
ಮನೆ, ಕಾನ್ವೆಂಟು, ಶಾಲೆ, ರಾಜ್ಯ, ದೇಶ… ಹೀಗೆ ನನ್ನ ಪರಿಧಿಯು ಹಿಗ್ಗುತ್ತಾ, ಬದಲಾಗುತ್ತಾ ಹೋದಂತೆ ಮಾತೃಭಾಷೆಯಾದ ಕನ್ನಡದ ಬಳಕೆಯು ಕಮ್ಮಿಯಾಗಿದ್ದು ಹೌದಾದರೂ ಭಾಷೆಯ ಬಗೆಗಿರುವ ಅಭಿಮಾನ, ಆಸಕ್ತಿ, ಕಾಳಜಿಗಳು ಮಾತ್ರ ಹೆಚ್ಚುತ್ತಾ ಹೋಗಿತ್ತು. `ಪರಿ’ ತಾಣಕ್ಕಾಗಿ ಮಾಡಿರುವ ಅನುವಾದಗಳು ನನ್ನ ಭಾಷಾಜ್ಞಾನ ಮತ್ತು ಸಾಮಾಜಿಕ ಅರಿವುಗಳ ವಿಸ್ತಾರದಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದಂತೂ ಸತ್ಯ. ಈ ಅವಕಾಶಕ್ಕಾಗಿ ನಾನು `ಪರಿ’ ತಂಡಕ್ಕೆ ಆಭಾರಿ.
How Jayamma spotted the leopard a photo essay by Jayamma Belliah, a Jenu Kuruba Adivasi from Ananjihundi village in Chamarajanagar district, Karnataka, is translated into Kannada by Naren: ಜಯಮ್ಮ ಚಿರತೆ ಕಂಡಾಗ
Prasad Naik is currently working as an Engineer at Uige of Republic of Angola (Africa), and is a freelance writer and columnist.
He writes: Offbeat stories and the stories which are needed to be told at any cost, have always been a force which had driven me to translation. Especially working with PARI has given me new insights to understand real India. Working on these translations which are successfully introducing an unseen face of India and voicing untold stories of rural India has always been a moving and memorable experience. PARI’s massive effort in giving a voice to unheard stories of rural India is truly appreciable. I am certain that these stories, what mainstream media has never covered, will reach to more people in coming days by translating enthusiasts.
ಮುಖ್ಯವಾಹಿನಿಯಿಂದ ತೀರಾ ವಿಭಿನ್ನ ಎನ್ನಿಸುವ, ಓದುಗರಿಗೆ ಹೇಳಲೇಬೇಕಾದ ಕಥೆಗಳನ್ನು ಅನುವಾದಿಸುವುದೆಂದರೆ ನನ್ನಿಷ್ಟದ ಕೆಲಸಗಳಲ್ಲೊಂದು. ಅದರಲ್ಲೂ `ಪರಿ’ಯ ಜೊತೆಗಿನ ನನ್ನ ಅನುವಾದದ ಅನುಭವಗಳು ಭಾರತವನ್ನು ಸಮಗ್ರವಾಗಿ ನೋಡುವಲ್ಲಿ ಹೊಸ ಒಳನೋಟಗಳನ್ನು ನನಗೆ ಕೊಟ್ಟಿವೆ. ಇಂತಹ ಭಾರತವನ್ನು ಎಲ್ಲರಿಗೂ ದಕ್ಕುವಂತೆ ಮಾಡುವ ಮತ್ತು ದನಿಯಾಗಬೇಕಿದ್ದ ಗ್ರಾಮೀಣ ಭಾರತದ ಕಥೆಗಳನ್ನು ಕನ್ನಡಕ್ಕೆ ತರುವ ಈ ಪ್ರಯತ್ನದಲ್ಲಿ ಮಾಡಿರುವ ಅನುವಾದಗಳು ನಿಜಕ್ಕೂ ಇಷ್ಟಪಟ್ಟು ಮಾಡಿದ ಅನುವಾದಗಳು. ಗ್ರಾಮೀಣ ಭಾರತದ ಕಥೆಗಳನ್ನು ವಿವಿಧ ಭಾರತೀಯ ಭಾಷೆಗಳಲ್ಲಿ ತರುತ್ತಿರುವ `ಪರಿ’ಯ ಕಾರ್ಯವು ಶ್ಲಾಘನೀಯ. ಮುಖ್ಯವಾಹಿನಿಯ ಮಾಧ್ಯಮಗಳಿಗೆ ಅಪರಿಚಿತವಾಗಿಯೇ ಉಳಿದ ಇಂತಹ ಕಥೆಗಳು ಉತ್ಸಾಹಿ ಅನುವಾದಕರಿಂದ ಎಲ್ಲರನ್ನೂ ತಲುಪಲಿ ಎಂಬ ಆಶಯ ನನ್ನದು.
Keepers of the seeds by Sweta Daga is translated into Kannada by Prasad ಬೀಜ ರಕ್ಷಕರು among many other stories on PARI.
Very happy to know so many enthusiasts volunteering to keep society aware of what it should be aware of
Thank you Mr G.N.Niagara. Delighted that you like the work and stories at PARI and that of our many translators.